ಎಮಿಲ್ ಅಬ್ಡರ್‌ಹೆಲ್ಡನ್ ಸ್ವಿಡ್ಜರ್‌ಲೆಂಡಿನ ಒಬ್ಬ ರಸಾಯನಶಾಸ್ತ್ರಜ್ಞ, ಮನಶ್ಶಾಸ್ತ್ರಜ್ಞ (೧೮೭೭-೧೯೫೦). ಹಾಲೆ ಎಂಬಲ್ಲಿ ಶರೀರಶಾಸ್ತ್ರದ ಪ್ರಾಧ್ಯಾಪಕನಾಗಿ ಕೆಲಸಮಾಡಿದ. ಪ್ರೊಟೀನ್‌ಗಳ ರಚನೆ, ಪಾಲಿಪೆಪ್ಟೈಡ್‌ಗಳ ವಿಶ್ಲೇಷಣೆ, ಮದ್ಯಸಾರೀಯ ವಸ್ತುಗಳ ಹುಳಿಗಟ್ಟುವಿಕೆಯ ಕ್ರಮ-ಇವುಗಳ ಬಗ್ಗೆ ಗಮನಾರ್ಹ ವಿಚಾರಗಳನ್ನು ತಿಳಿಸಿದ್ದಾನೆ. ಇವನ ಮುಖ್ಯ ಆವಿಷ್ಕಾರಗಳನ್ನು ೧೯೯೦ರ ದಶಕದ ಕೊನೆಯ ವರ್ಷಗಳಲ್ಲಿ ತಿರಸ್ಕರಿಸಲಾಯಿತು. ಅಬ್ಡರ್‌ಹೆಲ್ಡನ್ ಗರ್ಭಾವಸ್ಥೆಯ ಒಂದು ರಕ್ತಪರೀಕ್ಷೆ, ಮೂತ್ರದಲ್ಲಿ ಸಿಸ್ಟೈನ್‍ನ ಪರೀಕ್ಷೆಗೆ ಪರಿಚಿತನಾಗಿದ್ದಾನೆ. ಅದರ ಆರಂಭದ ಕೆಲವು ವರ್ಷಗಳ ನಂತರ ಗರ್ಭಧಾರಣೆಯ ಪರೀಕ್ಷೆಯು ವಿಶ್ವಾಸಾರ್ಹವಲ್ಲವೆಂದು ನಿರ್ಧಾರಿತವಾಯಿತು. == ಉಲ್ಲೇಖಗಳು == == ಹೊರಗಿನ ಕೊಂಡಿಗಳು == . ?